ನಾಕುತಂತಿ (ಕಿರುತೆರೆ ಧಾರಾವಾಹಿ): ಉದಯ ಟಿವಿಯಲ್ಲಿ ೨೦೦೫-೨೦೦೬ರಲ್ಲಿ ಪ್ರಸಾರವಾಗುತ್ತಿರುವ ಬಿ.ಸುರೇಶ ನಿರ್ದೇಶನದ ಕನ್ನಡ ಧಾರಾವಾಹಿ. == ಶೀರ್ಷಿಕೆ ಗೀತೆ == ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ದ.ರಾ.ಬೇಂದ್ರೆಯವರ ನಾಕುತಂತಿ ಕವನ ಸಂಕಲನದ ನಾನು-ನೀನು-ಆನು-ತಾನು ಕವಿತೆಯನ್ನು ಅಳವಡಿಸಿಕೊಂಡು ರಾಗ ಸಂಯೋಜಿಸಿದ್ದಾರೆ ಹಾಗು ಈ ಗೀತೆಯನ್ನು ಫಯಾಜ್ ಖಾನ್ ಹಾಡಿದ್ದಾರೆ. == ಹೊರಗಿನ ಸಂಪರ್ಕ == ಉದಯ ಟಿವಿ ಅಧಿಕೃತ ತಾಣದಲ್ಲಿ ನಾಕುತಂತಿ ಧಾರಾವಾಹಿಯ ಪುಟ 2006-09-24 ವೇಬ್ಯಾಕ್ ಮೆಷಿನ್ ನಲ್ಲಿ.